Posts

ಸರ್. ಎಂ.ವಿ. ಒಂದು ಸ್ಮರಣೆ

Image
ಸರ್ ಎಂ. ವಿಶ್ವೇಶ್ವರಯ್ಯನವರು ಜನಿಸಿ ಇಂದಿಗೆ ೧೫೧  (ಜನನ: ಸೆಪ್ಟಂಬರ್ ೧೫, ೧೮೬೦) ವರ್ಷಗಳು ಸಂಧಿವೆ. ಅವರ ಜನ್ಮದಿನವನ್ನು "ಇಂಜಿನಿಯರ‍್ಗಳ ದಿನ"ವನ್ನಾಗಿ ಆಚರಿಸಿ ಅವರನ್ನು ಗೌರವಿಸಲಾಗುತ್ತಿದೆ. ಅವರು ತಂತ್ರಜ್ಞರಾಗಿ ಹಲವಾರು ಗರಿಮೆಗಳನ್ನು ಸಾಧಿಸಿದ್ದಾರೆ. ಅದರಲ್ಲಿ ಹೆಸರಿಸ ಬಹುದಾದ ಕೆಲವು, ಒಂದು ಗ್ರಾಂ ಸಿಮೆಂಟನ್ನು ಕೂಡ ಉಪಯೋಗಿಸದೆ "ಸುರಕೆ ಗಾರೆ ತಂತ್ರಜ್ಞಾನ" ಬಳಸಿ ಅವರು ಕಟ್ಟಿದ ಕನ್ನಂಬಾಡಿ ಕಟ್ಟೆ (KRS Dam) ಇಂದಿಗೂ ಚಕ್ಕು ಚದುರದೆ ನಿಂತಿದೆ. ಅವರು ಹೈದರಾಬಾದ್ ನಗರಕ್ಕೆ ಮೂಸಿ ನದಿ (ಮುಚಕುಂದಾ ನದಿ)ಯ ಪ್ರವಾಹದಿಂದ ಉಂಟಾಗುತ್ತಿದ್ದ ಅಪಾಯವನ್ನು ತಪ್ಪಿಸಲು ಶಾಶ್ವತ ಪರಿಹಾರ ರೂಪಿಸಿದ್ದು ಮತ್ತು ನಗಾರಾಭಿವೃದ್ಧಿಗೆ ಬೇಕಾದ ಸಲಹೆ ಸೂಚನೆಗಳನ್ನಿತ್ತು ಹೈದರಾಬಾದ್ ನಗರವನ್ನು ಸುಂದರಗೊಳಿಸಲು ರೂಪುರೇಷೆಗಳನ್ನು ಕೊಟ್ಟಿದ್ದು ಹಾಗೆಯೇ ಓಮೆನ್ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ತೊಲಗಿಸಲು ಡ್ಯಾಮೊಂದನ್ನು ಕಟ್ಟಿ ಅದು ಪ್ರಜೆಗಳಿಗೆ ಮತ್ತು ಸರ್ಕಾರಕ್ಕೆ ಹೊರೆಯಾಗದಂತೆ ಆರ್ಥಿಕ ವ್ಯವಸ್ಥೆಯನ್ನು ರೂಪಿಸಿದ್ದು. ಹೀಗೆ ಒಂದೇ-ಎರಡೇ ಅವರ ಸಾಧನೆಗಳು?     ಇವೆಲ್ಲಾ ಒಂದು ಕಡೆಯಾದರೆ, ಅವರು ಸಾರ್ವಜನಿಕ ಬದುಕಿನಲ್ಲೂ ಬಹಳಷ್ಟು ಶುದ್ಧ ಹಸ್ತರಾಗಿದ್ದರು. ಅವರಿಗೆ ಮೈಸೂರು ಸಂಸ್ಥಾನದ ದಿವಾನಗಿರಿ ಅರಸಿ ಬಂದಾಗ ಅವರು ತಮ್ಮ ತಾಯಿಗೆ ಹೇಳಿದ ಮಾತು ನಿಜಕ್ಕೂ ಮನನೀಯ. ತಮ್ಮ ಬಂಧುಗಳಿಗೆ ತಮ್ಮ ಪ್ರಭಾವ
Image
ಹೋಟೆಲ್ ಸಾಲಿಟೇರಿನಲ್ಲೊಂದು ಸುಂದರ ಸಂಜೆ (ಡಾ. C.L.L. ಗೌಡ ಇವರ ಪದೋನ್ನತಿಯ ಸಂಭ್ರಮಾಚರಣೆ)  ಡಾ. C. ಲಕ್ಷ್ಮೀಪತಿ ಗೌಡ (ಡಾ. CLL ಗೌಡ) ಹಾಗೂ ಶ್ರೀಮತಿ ಸುಶೀಲ ಗೌಡ ಅವರನ್ನು ಪುಷ್ಪಗುಚ್ಛ ಕೊಟ್ಟು ಸ್ವಾಗತಿಸುತ್ತಿರುವ KAPAದ ಪದಾಧಿಕಾರಿಗಳಾದ ಡಾ. ವಿರೂಪಾಕ್ಷಪ್ಪ ಮತ್ತು ವೆಂಕಟೇಶ್ ಕುಲಕರ್ಣಿ ಕೆಲವೊಂದು ವ್ಯಕ್ತಿಗಳು ಕೆಲವೊಂದು ಸ್ಥಾನಗಳನ್ನು ಅಲಂಕರಿಸಿದಾಗ ಆ ವ್ಯಕ್ತಗಳಿಗೆ ಘನತೆ ಬರುತ್ತದೆ, ಕೆಲವೊಂದು ವ್ಯಕ್ತಿಗಳು ಕೆಲವೊಂದು ಸ್ಥಾನವನ್ನಲಂಕರಿಸಿದಾಗ ಆ ಸ್ಥಾನಕ್ಕೆ ಘನತೆ ಬರುತ್ತದೆ ಮತ್ತೆ ಅಪರೂಪಕ್ಕೆ ಕೆಲವೊಂದು ಸ್ಥಾನಗಳಿಗೆ ಕೆಲವೊಂದು ವ್ಯಕ್ತಿಗಳು ನೇಮಕಗೊಂಡಾಗ ಅವರು ತಮಗೂ ಹಾಗೂ ತಾವು ಅಲಂಕರಿಸಿದ ಸ್ಥಾನಕ್ಕೂ ಘನತೆಯನ್ನು ತಂದುಕೊಡುತ್ತಾರೆ, ಎಂದು ಹಿಂದೊಮ್ಮೆ ಬರೆದಿದ್ದೆ. ಆದರೆ ಕರ್ನಾಟಕ ಕೃಷಿ ವೃತ್ತಿಪರರ ಸಂಘ, KAPA (Karnataka Agri Professionals Association, Hyderabad), ಹೈದರಾಬಾದ್‌ಗೆ ಘನತೆ ಬಂದಿರುವುದು ಎರಡನೇ ವಿಧವಾದ ವ್ಯಕ್ತಿಗಳು ಇದರ ಪೋಷಕ ಸದಸ್ಯರ ಪಾತ್ರವನ್ನು ವಹಿಸುತ್ತಿರುವುದರಿಂದ ಎನ್ನುವುದು ಈಗ ಮತ್ತೇ ದೃಢಪಟ್ಟಿದೆ. ಇಂತಹ ಘನತೆವೆತ್ತ ಸದಸ್ಯರ ಸಾಲಿನಲ್ಲಿ ಇರುವವರು, ಇತ್ತೀಚೆಗಷ್ಟೇ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಕೊಡಮಾಡುವ ಪ್ರಶಸ್ತಿಗಳಿಗೆ ಭಾಜನರಾದ, KAPAದ ಹಾಲಿ ಅಧ್ಯಕ್ಷರಾಗಿರುವ ಡಾ. ಬಿ.ಸಿ. ವಿರಕ್ತಮಠ, ಆಯೋಜನಾ ನಿರ್ದೇಶಕರು, ಭತ್ತ ಸಂಶೋಧನಾ ನಿರ್ದೇಶ

ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳಗಳು ಏಕೆ?

ಹಿಂದೂ ಭಾರತದ ಧಾರ್ಮಿಕ ಸಂಪ್ರದಾಯಗಳನ್ನು ತುಚ್ಛೀಕರಿಸಲಾಗುತ್ತಿದೆ ೨೦೦೯ನೇ ಇಸವಿಯ ಮಧ್ಯಭಾಗದಲ್ಲಿ , ಅಮೇರಿಕದ ಉದ್ಯಮಿ ಬಿಲ್ ಗೇಟ್ಸ್ ಅವರ ಸಮಾಜ ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ ಅವರಿಗೆ ಶ್ರೀಮತಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡುವ ಸಂದರ್ಭದಲ್ಲಿ ಭಾರತದ ಪ್ರಮುಖ ರಾಜಕೀಯ ಪಕ್ಷವೊಂದರ ಅಧ್ಯಕ್ಷರು ಮಾತನಾಡುತ್ತಾ , " ನಮ್ಮ ದೇಶದಲ್ಲಿ ಬಹು ಹಿಂದಿನಿಂದಲೂ ಸಮಾಜ ಸೇವೆ ಮಾಡುವ ಪರಿಪಾಟವಿದೆ ಆದರೆ ಅದು ಪ್ರಮಾಣಬದ್ಧವಾಗಿಲ್ಲ " ಎಂದು ನುಡಿದರು . ಎರಡು ದಿನಗಳ ನಂತರ ಅಮೇರಿಕದ ವಾಲ್ ಸ್ಟ್ರೀಟ್ ಜರ್ನಲ್ ಹೀಗೆಯೇ ಅಪರೂಪಕ್ಕೆನ್ನುವಂತೆ ತನ್ನ ಪತ್ರಿಕೆಯಲ್ಲಿ ಈ ರಾಜಕೀಯ ನಾಯಕರ ಸಂಪೂರ್ಣ ಭಾಷಣವನ್ನು ಮುದ್ರಿಸಿತು . ಇದಾದ ಮತ್ತೆರಡು ದಿನಗಳ ನಂತರ ವಾಲ್ ಸ್ಟ್ರೀಟ್ ಜರ್ನಲ್ಲಿನ ಅಂಕಣ ಬರಹಗಾರರಲ್ಲೊಬ್ಬನಾದ ಪಾಲ್ ಬೆಕೆಟ್ ಭಾರತೀಯ ಉದ್ಯಮಿಗಳು ಬಿಲ್ ‌ ಗೇಟ್ಸ್ ‌ ನ ಸಮೀಪಕ್ಕೂ ಬರಲಾರರೆಂದು ಅವಹೇಳನಕಾರಿಯಾಗಿ ಬರೆಯುವುದಲ್ಲದೇ , " ಭಾರತದ ಶ್ರೀಮಂತರೇ ನಿಮ್ಮ ಥೈಲಿಗಳನ್ನು ಬಿಚ್ಚಿ " ಎನ್ನುವ ನೀತಿ ಬೋಧೆಯನ್ನೂ ಮಾಡಿದ. ಭಾರತದ ಬಗ್ಗೆ ಏನೇನೂ ಅರಿಯದ ಮತ್ತು ಭಾರತೀಯ ಸಮಾಜ ಸೇವಾ ಪರಂಪರೆಯನ್ನು ಕೀಳಾಗಿಸಿದ ಆ ರಾಜಕೀಯ ಮುಖಂಡನ ಪುಣ್ಯದಿಂದಾಗಿ ಬೆಕೆಟ್ ಭಾರತೀಯ ಉದ್ಯಮಪತಿಗಳನ್ನು ಅಡ್ಡವಿಟ್ಟುಕೊಂಡು ಭಾರತದ ಪ್ರತಿಷ್ಠೆಗೇ ಮಸಿ ಬಳಿಯಲು ಈ ಸಂದರ್ಭವನ್ನು ಉಪಯೋಗಿಸಿಕೊಂಡ .     ಆ ರ