ಕರ್ನಾಟಕದ ರಾಜಕಾರಣಿಗಳಿಗೆ ನಿಷ್ಟೆ ಇಲ್ಲವೆ?
ವಿಶ್ವ ವಿಖ್ಯಾತ (ಅ)ನೀತಿ ಕಥೆಗಳು ಒಂದಾನೊಂದು ರಾಜ್ಯ, ಆ ರಾಜ್ಯದ ಮೇಲೆ ಶತ್ರುಗಳು ದಂಡೆತ್ತಿ ಬಂದರು. ಇಲ್ಲಿಯ ಸೈನಿಕರೂ ಎಷ್ಟೇ ವೀರಾವೇಷದಿಂದ ಹೋರಾಡಿದರೂ ಶತ್ರುಗಳ ಕೈ ಮೇಲಾಗುತ್ತಿತ್ತು. ಇದಕ್ಕೆ ಪರಿಹಾರವೇನೆಂದು ರಾಜ ತನ್ನ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ. ಆಗ ಓರ್ವ ಮಂತ್ರಿ ಒಂದು ಸಲಹೆಯನ್ನು ಕೊಟ್ಟ; ಅದೇನೆಂದರೆ ರಾಜಧಾನಿಯ ಹತ್ತಿರವಿರುವ ಕಾಡಿನಲ್ಲಿ ತಪೋನಿರತನಾಗಿರುವ ಮುನಿಯ ಬಳಿಗೆ ಸಾರಿ ಅವರ ಹತ್ತಿರ ತಮ್ಮ ರಾಜ್ಯವನ್ನು ಸಂಕಷ್ಟದಿಂದ ಪಾರುಮಾಡೆಂದು ಬೇಡುವುದು ಮತ್ತು ಅವನ ಮಾರ್ಗದರ್ಶನದಂತೆ ನಡೆಯುವುದು. ಎಲ್ಲರಿಗೂ ಈ ಸೂಚನೆ ಸರಿಯೆನಿಸಿತು. ಅದರಂತೆ ರಾಜನು ತನ್ನ ಪರಿವಾರದೊಂದಿಗೆ ಮುನಿಯಿರುವಲ್ಲಿಗೆ ಹೊರಟು ತನ್ನ ಕಷ್ಟವನ್ನು ನಿವೇದಿಸಿಕೊಂಡ. ಮುನಿಯಿವರಿಗೆ ಒಂದು ಸಲಹೆಯಿತ್ತ, ಅದೇನೆಂದರೆ ಒಬ್ಬ ಪತಿವ್ರತೆಯ ಮುಂದಾಳತ್ವದಲ್ಲಿ ನಿಮ್ಮ ಸೇನೆಯು ಯುದ್ಧ ಮಾಡಿದರೆ ನಿಮಗೆ ಜಯವಾಗುತ್ತದೆಂಬುದು. ರಾಜ ಹಗುರ ಮನಸ್ಸಿನಿಂದ ತನ್ನ ಸಮಸ್ಯೆಗೆ ಸುಲಭ ಪರಿಹಾರ ದೊರೆಯಿತೆಂದು ನಿರಾಳ ಮನಸ್ಕನಾಗಿ ತನ್ನ ಅರಮನೆಗೆ ಹಿಂತಿರುಗಿದ. ಆದರೆ ಅಸಲು ಸಮಸ್ಯೆ ಶುರುವಾದದ್ದೇ ಒಬ್ಬ ಪತಿವ್ರತಾ ಶಿರೋಮಣಿಯನ್ನು ಹುಡುಕಲಿಕ್ಕೆ ಪ್ರಾರಂಭಿಸಿದ ಮೇಲೆ. ಮೊದಲನೆಯದಾಗಿ ಸೇನಾಪತಿಯ ಹೆಂಡತಿಯನ್ನು ಸೇನೆಯ ನಾಯಕತ್ವವನ್ನು ವಹಿಸಿಕೊಳ್ಳಲು ಕೇಳಲಾಯಿತು. ಆಗ ಸೇನಾಪತಿಯ ಹೆಂಡತಿ ತನ್ನ ಪತಿ ಯಾವಾಗಲೂ ಯುದ್ಧದಲ್ಲಿ ತೊಡಗಿರುವುದರಿಂದ ತ...