ಹೋಟೆಲ್ ಸಾಲಿಟೇರಿನಲ್ಲೊಂದು ಸುಂದರ ಸಂಜೆ (ಡಾ. C.L.L. ಗೌಡ ಇವರ ಪದೋನ್ನತಿಯ ಸಂಭ್ರಮಾಚರಣೆ) ಡಾ. C. ಲಕ್ಷ್ಮೀಪತಿ ಗೌಡ (ಡಾ. CLL ಗೌಡ) ಹಾಗೂ ಶ್ರೀಮತಿ ಸುಶೀಲ ಗೌಡ ಅವರನ್ನು ಪುಷ್ಪಗುಚ್ಛ ಕೊಟ್ಟು ಸ್ವಾಗತಿಸುತ್ತಿರುವ KAPAದ ಪದಾಧಿಕಾರಿಗಳಾದ ಡಾ. ವಿರೂಪಾಕ್ಷಪ್ಪ ಮತ್ತು ವೆಂಕಟೇಶ್ ಕುಲಕರ್ಣಿ ಕೆಲವೊಂದು ವ್ಯಕ್ತಿಗಳು ಕೆಲವೊಂದು ಸ್ಥಾನಗಳನ್ನು ಅಲಂಕರಿಸಿದಾಗ ಆ ವ್ಯಕ್ತಗಳಿಗೆ ಘನತೆ ಬರುತ್ತದೆ, ಕೆಲವೊಂದು ವ್ಯಕ್ತಿಗಳು ಕೆಲವೊಂದು ಸ್ಥಾನವನ್ನಲಂಕರಿಸಿದಾಗ ಆ ಸ್ಥಾನಕ್ಕೆ ಘನತೆ ಬರುತ್ತದೆ ಮತ್ತೆ ಅಪರೂಪಕ್ಕೆ ಕೆಲವೊಂದು ಸ್ಥಾನಗಳಿಗೆ ಕೆಲವೊಂದು ವ್ಯಕ್ತಿಗಳು ನೇಮಕಗೊಂಡಾಗ ಅವರು ತಮಗೂ ಹಾಗೂ ತಾವು ಅಲಂಕರಿಸಿದ ಸ್ಥಾನಕ್ಕೂ ಘನತೆಯನ್ನು ತಂದುಕೊಡುತ್ತಾರೆ, ಎಂದು ಹಿಂದೊಮ್ಮೆ ಬರೆದಿದ್ದೆ. ಆದರೆ ಕರ್ನಾಟಕ ಕೃಷಿ ವೃತ್ತಿಪರರ ಸಂಘ, KAPA (Karnataka Agri Professionals Association, Hyderabad), ಹೈದರಾಬಾದ್‌ಗೆ ಘನತೆ ಬಂದಿರುವುದು ಎರಡನೇ ವಿಧವಾದ ವ್ಯಕ್ತಿಗಳು ಇದರ ಪೋಷಕ ಸದಸ್ಯರ ಪಾತ್ರವನ್ನು ವಹಿಸುತ್ತಿರುವುದರಿಂದ ಎನ್ನುವುದು ಈಗ ಮತ್ತೇ ದೃಢಪಟ್ಟಿದೆ. ಇಂತಹ ಘನತೆವೆತ್ತ ಸದಸ್ಯರ ಸಾಲಿನಲ್ಲಿ ಇರುವವರು, ಇತ್ತೀಚೆಗಷ್ಟೇ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಕೊಡಮಾಡುವ ಪ್ರಶಸ್ತಿಗಳಿಗೆ ಭಾಜನರಾದ, KAPAದ ಹಾಲಿ ಅಧ್ಯಕ್ಷರಾಗಿರುವ ಡಾ. ಬಿ.ಸಿ. ವಿರಕ್ತಮಠ, ಆಯೋಜನಾ ನಿರ್ದೇಶಕರು, ಭತ್ತ ಸಂಶೋಧನಾ ನಿರ...
Posts
Showing posts from 2013
ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳಗಳು ಏಕೆ?
- Get link
- X
- Other Apps
ಹಿಂದೂ ಭಾರತದ ಧಾರ್ಮಿಕ ಸಂಪ್ರದಾಯಗಳನ್ನು ತುಚ್ಛೀಕರಿಸಲಾಗುತ್ತಿದೆ ೨೦೦೯ನೇ ಇಸವಿಯ ಮಧ್ಯಭಾಗದಲ್ಲಿ , ಅಮೇರಿಕದ ಉದ್ಯಮಿ ಬಿಲ್ ಗೇಟ್ಸ್ ಅವರ ಸಮಾಜ ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ ಅವರಿಗೆ ಶ್ರೀಮತಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡುವ ಸಂದರ್ಭದಲ್ಲಿ ಭಾರತದ ಪ್ರಮುಖ ರಾಜಕೀಯ ಪಕ್ಷವೊಂದರ ಅಧ್ಯಕ್ಷರು ಮಾತನಾಡುತ್ತಾ , " ನಮ್ಮ ದೇಶದಲ್ಲಿ ಬಹು ಹಿಂದಿನಿಂದಲೂ ಸಮಾಜ ಸೇವೆ ಮಾಡುವ ಪರಿಪಾಟವಿದೆ ಆದರೆ ಅದು ಪ್ರಮಾಣಬದ್ಧವಾಗಿಲ್ಲ " ಎಂದು ನುಡಿದರು . ಎರಡು ದಿನಗಳ ನಂತರ ಅಮೇರಿಕದ ವಾಲ್ ಸ್ಟ್ರೀಟ್ ಜರ್ನಲ್ ಹೀಗೆಯೇ ಅಪರೂಪಕ್ಕೆನ್ನುವಂತೆ ತನ್ನ ಪತ್ರಿಕೆಯಲ್ಲಿ ಈ ರಾಜಕೀಯ ನಾಯಕರ ಸಂಪೂರ್ಣ ಭಾಷಣವನ್ನು ಮುದ್ರಿಸಿತು . ಇದಾದ ಮತ್ತೆರಡು ದಿನಗಳ ನಂತರ ವಾಲ್ ಸ್ಟ್ರೀಟ್ ಜರ್ನಲ್ಲಿನ ಅಂಕಣ ಬರಹಗಾರರಲ್ಲೊಬ್ಬನಾದ ಪಾಲ್ ಬೆಕೆಟ್ ಭಾರತೀಯ ಉದ್ಯಮಿಗಳು ಬಿಲ್ ಗೇಟ್ಸ್ ನ ಸಮೀಪಕ್ಕೂ ಬರಲಾರರೆಂದು ಅವಹೇಳನಕಾರಿಯಾಗಿ ಬರೆಯುವುದಲ್ಲದೇ , " ಭಾರತದ ಶ್ರೀಮಂತರೇ ನಿಮ್ಮ ಥೈಲಿಗಳನ್ನು ಬಿಚ್ಚಿ " ಎನ್ನುವ ನೀತಿ ಬೋಧೆಯನ್ನೂ ಮಾಡಿದ. ಭಾರತದ ಬಗ್ಗೆ ಏನೇನೂ ಅರಿಯದ ಮತ್ತು ಭಾರತೀಯ ಸಮಾಜ ಸೇವಾ ಪರಂಪರೆಯನ್ನು ಕೀಳಾಗಿಸಿದ ಆ ರಾಜಕೀಯ ಮುಖಂಡನ ಪುಣ್ಯದಿಂದಾಗಿ ಬೆಕೆಟ್ ಭಾರತೀಯ ಉದ್ಯಮಪತಿಗಳನ್ನು ಅಡ್ಡವಿಟ್ಟುಕೊಂಡು ಭಾರತದ ಪ್ರತಿಷ್ಠೆಗೇ ಮಸಿ ಬಳಿಯಲು ಈ ಸಂದರ್ಭವನ್ನು ಉಪಯೋಗಿಸಿಕೊಂಡ . ಆ ರ...