Posts

Showing posts from 2019

ಸರ್. ಎಂ.ವಿ. ಒಂದು ಸ್ಮರಣೆ

Image
ಸರ್ ಎಂ. ವಿಶ್ವೇಶ್ವರಯ್ಯನವರು ಜನಿಸಿ ಇಂದಿಗೆ ೧೫೧  (ಜನನ: ಸೆಪ್ಟಂಬರ್ ೧೫, ೧೮೬೦) ವರ್ಷಗಳು ಸಂಧಿವೆ. ಅವರ ಜನ್ಮದಿನವನ್ನು "ಇಂಜಿನಿಯರ‍್ಗಳ ದಿನ"ವನ್ನಾಗಿ ಆಚರಿಸಿ ಅವರನ್ನು ಗೌರವಿಸಲಾಗುತ್ತಿದೆ. ಅವರು ತಂತ್ರಜ್ಞರಾಗಿ ಹಲವಾರು ಗರಿಮೆಗಳನ್ನು ಸಾಧಿಸಿದ್ದಾರೆ. ಅದರಲ್ಲಿ ಹೆಸರಿಸ ಬಹುದಾದ ಕೆಲವು, ಒಂದು ಗ್ರಾಂ ಸಿಮೆಂಟನ್ನು ಕೂಡ ಉಪಯೋಗಿಸದೆ "ಸುರಕೆ ಗಾರೆ ತಂತ್ರಜ್ಞಾನ" ಬಳಸಿ ಅವರು ಕಟ್ಟಿದ ಕನ್ನಂಬಾಡಿ ಕಟ್ಟೆ (KRS Dam) ಇಂದಿಗೂ ಚಕ್ಕು ಚದುರದೆ ನಿಂತಿದೆ. ಅವರು ಹೈದರಾಬಾದ್ ನಗರಕ್ಕೆ ಮೂಸಿ ನದಿ (ಮುಚಕುಂದಾ ನದಿ)ಯ ಪ್ರವಾಹದಿಂದ ಉಂಟಾಗುತ್ತಿದ್ದ ಅಪಾಯವನ್ನು ತಪ್ಪಿಸಲು ಶಾಶ್ವತ ಪರಿಹಾರ ರೂಪಿಸಿದ್ದು ಮತ್ತು ನಗಾರಾಭಿವೃದ್ಧಿಗೆ ಬೇಕಾದ ಸಲಹೆ ಸೂಚನೆಗಳನ್ನಿತ್ತು ಹೈದರಾಬಾದ್ ನಗರವನ್ನು ಸುಂದರಗೊಳಿಸಲು ರೂಪುರೇಷೆಗಳನ್ನು ಕೊಟ್ಟಿದ್ದು ಹಾಗೆಯೇ ಓಮೆನ್ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ತೊಲಗಿಸಲು ಡ್ಯಾಮೊಂದನ್ನು ಕಟ್ಟಿ ಅದು ಪ್ರಜೆಗಳಿಗೆ ಮತ್ತು ಸರ್ಕಾರಕ್ಕೆ ಹೊರೆಯಾಗದಂತೆ ಆರ್ಥಿಕ ವ್ಯವಸ್ಥೆಯನ್ನು ರೂಪಿಸಿದ್ದು. ಹೀಗೆ ಒಂದೇ-ಎರಡೇ ಅವರ ಸಾಧನೆಗಳು?     ಇವೆಲ್ಲಾ ಒಂದು ಕಡೆಯಾದರೆ, ಅವರು ಸಾರ್ವಜನಿಕ ಬದುಕಿನಲ್ಲೂ ಬಹಳಷ್ಟು ಶುದ್ಧ ಹಸ್ತರಾಗಿದ್ದರು. ಅವರಿಗೆ ಮೈಸೂರು ಸಂಸ್ಥಾನದ ದಿವಾನಗಿರಿ ಅರಸಿ ಬಂದಾಗ ಅವರು ತಮ್ಮ ತಾಯಿಗೆ ಹೇಳಿದ ಮಾತು ನಿಜಕ್ಕೂ ಮನನೀಯ. ತಮ್ಮ ಬಂಧುಗಳಿಗೆ ತಮ್ಮ ಪ್ರಭಾವ ...