Posts

Showing posts from September, 2013

ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳಗಳು ಏಕೆ?

ಹಿಂದೂ ಭಾರತದ ಧಾರ್ಮಿಕ ಸಂಪ್ರದಾಯಗಳನ್ನು ತುಚ್ಛೀಕರಿಸಲಾಗುತ್ತಿದೆ ೨೦೦೯ನೇ ಇಸವಿಯ ಮಧ್ಯಭಾಗದಲ್ಲಿ , ಅಮೇರಿಕದ ಉದ್ಯಮಿ ಬಿಲ್ ಗೇಟ್ಸ್ ಅವರ ಸಮಾಜ ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ ಅವರಿಗೆ ಶ್ರೀಮತಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡುವ ಸಂದರ್ಭದಲ್ಲಿ ಭಾರತದ ಪ್ರಮುಖ ರಾಜಕೀಯ ಪಕ್ಷವೊಂದರ ಅಧ್ಯಕ್ಷರು ಮಾತನಾಡುತ್ತಾ , " ನಮ್ಮ ದೇಶದಲ್ಲಿ ಬಹು ಹಿಂದಿನಿಂದಲೂ ಸಮಾಜ ಸೇವೆ ಮಾಡುವ ಪರಿಪಾಟವಿದೆ ಆದರೆ ಅದು ಪ್ರಮಾಣಬದ್ಧವಾಗಿಲ್ಲ " ಎಂದು ನುಡಿದರು . ಎರಡು ದಿನಗಳ ನಂತರ ಅಮೇರಿಕದ ವಾಲ್ ಸ್ಟ್ರೀಟ್ ಜರ್ನಲ್ ಹೀಗೆಯೇ ಅಪರೂಪಕ್ಕೆನ್ನುವಂತೆ ತನ್ನ ಪತ್ರಿಕೆಯಲ್ಲಿ ಈ ರಾಜಕೀಯ ನಾಯಕರ ಸಂಪೂರ್ಣ ಭಾಷಣವನ್ನು ಮುದ್ರಿಸಿತು . ಇದಾದ ಮತ್ತೆರಡು ದಿನಗಳ ನಂತರ ವಾಲ್ ಸ್ಟ್ರೀಟ್ ಜರ್ನಲ್ಲಿನ ಅಂಕಣ ಬರಹಗಾರರಲ್ಲೊಬ್ಬನಾದ ಪಾಲ್ ಬೆಕೆಟ್ ಭಾರತೀಯ ಉದ್ಯಮಿಗಳು ಬಿಲ್ ‌ ಗೇಟ್ಸ್ ‌ ನ ಸಮೀಪಕ್ಕೂ ಬರಲಾರರೆಂದು ಅವಹೇಳನಕಾರಿಯಾಗಿ ಬರೆಯುವುದಲ್ಲದೇ , " ಭಾರತದ ಶ್ರೀಮಂತರೇ ನಿಮ್ಮ ಥೈಲಿಗಳನ್ನು ಬಿಚ್ಚಿ " ಎನ್ನುವ ನೀತಿ ಬೋಧೆಯನ್ನೂ ಮಾಡಿದ. ಭಾರತದ ಬಗ್ಗೆ ಏನೇನೂ ಅರಿಯದ ಮತ್ತು ಭಾರತೀಯ ಸಮಾಜ ಸೇವಾ ಪರಂಪರೆಯನ್ನು ಕೀಳಾಗಿಸಿದ ಆ ರಾಜಕೀಯ ಮುಖಂಡನ ಪುಣ್ಯದಿಂದಾಗಿ ಬೆಕೆಟ್ ಭಾರತೀಯ ಉದ್ಯಮಪತಿಗಳನ್ನು ಅಡ್ಡವಿಟ್ಟುಕೊಂಡು ಭಾರತದ ಪ್ರತಿಷ್ಠೆಗೇ ಮಸಿ ಬಳಿಯಲು ಈ ಸಂದರ್ಭವನ್ನು ಉಪಯೋಗಿಸಿಕೊಂಡ .     ಆ ರ...