Posts

Showing posts from October, 2013
Image
ಹೋಟೆಲ್ ಸಾಲಿಟೇರಿನಲ್ಲೊಂದು ಸುಂದರ ಸಂಜೆ (ಡಾ. C.L.L. ಗೌಡ ಇವರ ಪದೋನ್ನತಿಯ ಸಂಭ್ರಮಾಚರಣೆ)  ಡಾ. C. ಲಕ್ಷ್ಮೀಪತಿ ಗೌಡ (ಡಾ. CLL ಗೌಡ) ಹಾಗೂ ಶ್ರೀಮತಿ ಸುಶೀಲ ಗೌಡ ಅವರನ್ನು ಪುಷ್ಪಗುಚ್ಛ ಕೊಟ್ಟು ಸ್ವಾಗತಿಸುತ್ತಿರುವ KAPAದ ಪದಾಧಿಕಾರಿಗಳಾದ ಡಾ. ವಿರೂಪಾಕ್ಷಪ್ಪ ಮತ್ತು ವೆಂಕಟೇಶ್ ಕುಲಕರ್ಣಿ ಕೆಲವೊಂದು ವ್ಯಕ್ತಿಗಳು ಕೆಲವೊಂದು ಸ್ಥಾನಗಳನ್ನು ಅಲಂಕರಿಸಿದಾಗ ಆ ವ್ಯಕ್ತಗಳಿಗೆ ಘನತೆ ಬರುತ್ತದೆ, ಕೆಲವೊಂದು ವ್ಯಕ್ತಿಗಳು ಕೆಲವೊಂದು ಸ್ಥಾನವನ್ನಲಂಕರಿಸಿದಾಗ ಆ ಸ್ಥಾನಕ್ಕೆ ಘನತೆ ಬರುತ್ತದೆ ಮತ್ತೆ ಅಪರೂಪಕ್ಕೆ ಕೆಲವೊಂದು ಸ್ಥಾನಗಳಿಗೆ ಕೆಲವೊಂದು ವ್ಯಕ್ತಿಗಳು ನೇಮಕಗೊಂಡಾಗ ಅವರು ತಮಗೂ ಹಾಗೂ ತಾವು ಅಲಂಕರಿಸಿದ ಸ್ಥಾನಕ್ಕೂ ಘನತೆಯನ್ನು ತಂದುಕೊಡುತ್ತಾರೆ, ಎಂದು ಹಿಂದೊಮ್ಮೆ ಬರೆದಿದ್ದೆ. ಆದರೆ ಕರ್ನಾಟಕ ಕೃಷಿ ವೃತ್ತಿಪರರ ಸಂಘ, KAPA (Karnataka Agri Professionals Association, Hyderabad), ಹೈದರಾಬಾದ್‌ಗೆ ಘನತೆ ಬಂದಿರುವುದು ಎರಡನೇ ವಿಧವಾದ ವ್ಯಕ್ತಿಗಳು ಇದರ ಪೋಷಕ ಸದಸ್ಯರ ಪಾತ್ರವನ್ನು ವಹಿಸುತ್ತಿರುವುದರಿಂದ ಎನ್ನುವುದು ಈಗ ಮತ್ತೇ ದೃಢಪಟ್ಟಿದೆ. ಇಂತಹ ಘನತೆವೆತ್ತ ಸದಸ್ಯರ ಸಾಲಿನಲ್ಲಿ ಇರುವವರು, ಇತ್ತೀಚೆಗಷ್ಟೇ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಕೊಡಮಾಡುವ ಪ್ರಶಸ್ತಿಗಳಿಗೆ ಭಾಜನರಾದ, KAPAದ ಹಾಲಿ ಅಧ್ಯಕ್ಷರಾಗಿರುವ ಡಾ. ಬಿ.ಸಿ. ವಿರಕ್ತಮಠ, ಆಯೋಜನಾ ನಿರ್ದೇಶಕರು, ಭತ್ತ ಸಂಶೋಧನಾ ನಿರ...